ಲೂಕನು 2:25

ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.

ಸಂದರ್ಭದೊಂದಿಗೆ ಓದಿ · ಲೂಕನು 2

23(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).

24ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು.

25ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.

26ಕರ್ತನಾಗಿರುವ ಕ್ರಿಸ್ತನನ್ನು ಅವನು ನೋಡುವದಕ್ಕಿಂತ ಮುಂಚೆ ಮರಣ ಹೊಂದುವದಿಲ್ಲವೆಂದು ಪರಿಶುದ್ಧಾತ್ಮನಿಂದ ಅವನಿಗೆ ಪ್ರಕಟವಾಗಿತ್ತು.

27ಅವನು ಆತ್ಮನಿಂದ ದೇವಾಲಯದೊಳಗೆ ಬಂದನು; ಶಿಶುವಾದ ಯೇಸುವಿನ ತಂದೆತಾಯಿಗಳು ನ್ಯಾಯಪ್ರಮಾಣದ ಪದ್ಧತಿಯ ಪ್ರಕಾರ ಮಾಡುವದಕ್ಕಾಗಿ ಆತನನ್ನು ಒಳಗೆ ತಂದರು.

ಲೂಕನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी