(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).
21ಶಿಶುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಎಂಟು ದಿನಗಳು ಕಳೆದ ಮೇಲೆ ಆತನನ್ನು ಗರ್ಭಧರಿಸು ವದಕ್ಕಿಂತ ಮುಂಚಿತವಾಗಿ ದೂತನು ಹೆಸರಿಟ್ಟಂತೆಯೇ ಆತನು ಯೇಸು ಎಂದು ಕರೆಯಲ್ಪಟ್ಟನು.
22ಮೋಶೆಯ ನ್ಯಾಯಪ್ರಮಾಣದ ಪ್ರಕಾರ ಆಕೆಯ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ ಅವರು ಆತನನ್ನು ಕರ್ತನಿಗೆ ಸಮರ್ಪಿಸುವದಕ್ಕಾಗಿ ಯೆರೂಸಲೇಮಿಗೆ ತಂದರು.
23(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).
24ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು.
25ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ