ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು.
22ಮೋಶೆಯ ನ್ಯಾಯಪ್ರಮಾಣದ ಪ್ರಕಾರ ಆಕೆಯ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ ಅವರು ಆತನನ್ನು ಕರ್ತನಿಗೆ ಸಮರ್ಪಿಸುವದಕ್ಕಾಗಿ ಯೆರೂಸಲೇಮಿಗೆ ತಂದರು.
23(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).
24ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು.
25ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.
26ಕರ್ತನಾಗಿರುವ ಕ್ರಿಸ್ತನನ್ನು ಅವನು ನೋಡುವದಕ್ಕಿಂತ ಮುಂಚೆ ಮರಣ ಹೊಂದುವದಿಲ್ಲವೆಂದು ಪರಿಶುದ್ಧಾತ್ಮನಿಂದ ಅವನಿಗೆ ಪ್ರಕಟವಾಗಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ