ಯಾಜಕಕಾಂಡ 16:25

ಪಾಪಬಲಿಯ ಕೊಬ್ಬು ಯಜ್ಞ ವೇದಿಯ ಮೇಲೆ ಸುಡಲ್ಪಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 16

23ಆರೋನನು ಸಭೆಯ ಗುಡಾರದೊಳಗೆ ಬಂದು ತಾನು ಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟು ಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗ ಳನ್ನು ಅಲ್ಲಿಯೇ ಬಿಡಬೇಕು.

24ಅವನು ಪರಿಶುದ್ಧ ಸ್ಥಳದಲ್ಲಿ ತನ್ನ ಶರೀರವನ್ನು ನೀರಿನಿಂದ ತೊಳೆದು ತನ್ನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಬಂದು ತನ್ನ ದಹನಬಲಿಯನ್ನೂ ಜನರ ದಹನಬಲಿಯನ್ನೂ ಸಮ ರ್ಪಿಸಿ ತನಗೋಸ್ಕರವೂ ಜನರಿಗೋಸ್ಕರವೂ ಪ್ರಾಯ ಶ್ಚಿತ್ತಮಾಡಬೇಕು.

25ಪಾಪಬಲಿಯ ಕೊಬ್ಬು ಯಜ್ಞ ವೇದಿಯ ಮೇಲೆ ಸುಡಲ್ಪಡಬೇಕು.

26ಪಾಪ ಪಶುವಿಗಾಗಿ ಆಡನ್ನು ಹೋಗಲು ಬಿಟ್ಟ ವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ತನ್ನ ಶರೀರ ವನ್ನು ನೀರಿನಲ್ಲಿ ತೊಳೆದುಕೊಂಡ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.

27ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು.

ಯಾಜಕಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी