ಯಾಜಕಕಾಂಡ 16:27

ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 16

25ಪಾಪಬಲಿಯ ಕೊಬ್ಬು ಯಜ್ಞ ವೇದಿಯ ಮೇಲೆ ಸುಡಲ್ಪಡಬೇಕು.

26ಪಾಪ ಪಶುವಿಗಾಗಿ ಆಡನ್ನು ಹೋಗಲು ಬಿಟ್ಟ ವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ತನ್ನ ಶರೀರ ವನ್ನು ನೀರಿನಲ್ಲಿ ತೊಳೆದುಕೊಂಡ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.

27ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು.

28ಅವು ಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಕ್ಕೆ ಬರಬೇಕು.

29ನೀವು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮಲ್ಲಿ ಒಬ್ಬ ಸ್ವದೇಶದವನಾಗಲಿ ಪ್ರವಾಸಿಯಾಗಿರುವ ಪರಕೀಯನಾಗಲಿ ನಿಮ್ಮ ಆತ್ಮಗಳನ್ನು ಕುಂದಿಸಿ ಯಾವ ಕೆಲಸವನ್ನೂ ಮಾಡದಂತೆ ಇದು ನಿಮಗೆ ಶಾಶ್ವತವಾದ ಒಂದು ನಿಯಮವಾಗಿರುವದು.

ಯಾಜಕಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी