ಪರಮ ಗೀತ 8:5

ತನ್ನ ಪ್ರಿಯನ ಮೇಲೆ ಆತುಕೊಂಡು ಅರಣ್ಯದಿಂದ ಬರುವ ಇವಳು ಯಾರು? ಸೇಬು ಗಿಡದ ಕೆಳಗೆ ನಿನ್ನನ್ನು ಎಚ್ಚರಿಸಿದೆನು; ಅಲ್ಲಿ ನಿನ್ನ ತಾಯಿ ನಿನ್ನನ್ನು ಪಡೆದಳು; ಅಲ್ಲಿ ನಿನ್ನನ್ನು ಹೆತ್ತವಳು ನಿನ್ನನ್ನು ಪಡೆದಳು.

ಸಂದರ್ಭದೊಂದಿಗೆ ಓದಿ · ಪರಮ ಗೀತ 8

3ಅವನ ಎಡಗೈ ನನ್ನ ತಲೆಯ ಕೆಳಗಿರುವದು; ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳುವದು.

4ಓ ಯೆರೂಸಲೇಮಿನ ಕುಮಾರ್ತೆಯರೇ, ನಿಮಗೆ ಆಜ್ಞಾಪಿಸುತ್ತೇನೆ--ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸದೆಯೂ ನನ್ನ ಪ್ರೀತಿಯನ್ನು ಎಚ್ಚರಿ ಸದೆಯೂ ಇರ್ರಿ.

5ತನ್ನ ಪ್ರಿಯನ ಮೇಲೆ ಆತುಕೊಂಡು ಅರಣ್ಯದಿಂದ ಬರುವ ಇವಳು ಯಾರು? ಸೇಬು ಗಿಡದ ಕೆಳಗೆ ನಿನ್ನನ್ನು ಎಚ್ಚರಿಸಿದೆನು; ಅಲ್ಲಿ ನಿನ್ನ ತಾಯಿ ನಿನ್ನನ್ನು ಪಡೆದಳು; ಅಲ್ಲಿ ನಿನ್ನನ್ನು ಹೆತ್ತವಳು ನಿನ್ನನ್ನು ಪಡೆದಳು.

6ನಿನ್ನ ಹೃದಯದ ಮೇಲೆ ಒಂದು ಮುದ್ರೆಯ ಹಾಗೆಯೂ ನಿನ್ನ ಕೈಮೇಲೆ ಒಂದು ಮುದ್ರೆಯ ಹಾಗೆಯೂ ನನ್ನನ್ನು ಹಾಕು; ಪ್ರೀತಿಯು ಮರಣದ ಹಾಗೆ ಬಲವಾಗಿರುವದು; ರೋಷವು ಸಮಾಧಿಯ ಹಾಗೆ ಕ್ರೂರವಾಗಿರುವದು; ಅದರ ಕಲ್ಲಿದ್ದಲುಗಳ ಬೆಂಕಿಯು ಪ್ರಜ್ವಲಿಸುವ ಜ್ವಾಲೆಯ ಕಿಡಿಗಳಾಗಿ ಇರುವವು.

7ಅನೇಕ ಜಲಗಳು ಪ್ರೀತಿಯನ್ನು ಆರಿ ಸಲಾರವು; ಪ್ರವಾಹಗಳು ಅದನ್ನು ಮುಣುಗಿಸ ಲಾರವು; ಮನುಷ್ಯನು ತನ್ನ ಮನೆಯ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುವದು.

ಪರಮ ಗೀತ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी