ಅವನ ಎಡಗೈ ನನ್ನ ತಲೆಯ ಕೆಳಗಿರುವದು; ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳುವದು.
1ನೀನು ನನ್ನ ತಾಯಿಯ ಸ್ತನಗಳನ್ನು ಕುಡಿದ ನನ್ನ ಸಹೋದರನ ಹಾಗೆ ಇದ್ದರೆ ಎಷ್ಟೋ ಉತ್ತಮ! ನಾನು ನಿನ್ನನ್ನು ಹೊರಗೆ ಕಂಡರೆ ನಿನಗೆ ಮುದ್ದಿಡುವೆನು; ಹೌದು, (ಜನರು) ನನ್ನನ್ನು ತಿರಸ್ಕರಿಸರು.
2ನೀನು ನನ್ನನ್ನು ಉಪದೇಶಿಸುವ ಹಾಗೆ ನಾನು ನಿನ್ನನ್ನು ನಡಿಸಿ ನನ್ನ ತಾಯಿಯ ಮನೆಯೊಳಗೆ ನಿನ್ನನ್ನು ಬರಮಾಡಿ, ದಾಳಿಂಬರ ಹಣ್ಣಿನ ರಸವಾದ ಊರಿಟ್ಟ ಪಾನವನ್ನು ನಿನಗೆ ಕುಡಿಸುತ್ತಿದ್ದೆನು.
3ಅವನ ಎಡಗೈ ನನ್ನ ತಲೆಯ ಕೆಳಗಿರುವದು; ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳುವದು.
4ಓ ಯೆರೂಸಲೇಮಿನ ಕುಮಾರ್ತೆಯರೇ, ನಿಮಗೆ ಆಜ್ಞಾಪಿಸುತ್ತೇನೆ--ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸದೆಯೂ ನನ್ನ ಪ್ರೀತಿಯನ್ನು ಎಚ್ಚರಿ ಸದೆಯೂ ಇರ್ರಿ.
5ತನ್ನ ಪ್ರಿಯನ ಮೇಲೆ ಆತುಕೊಂಡು ಅರಣ್ಯದಿಂದ ಬರುವ ಇವಳು ಯಾರು? ಸೇಬು ಗಿಡದ ಕೆಳಗೆ ನಿನ್ನನ್ನು ಎಚ್ಚರಿಸಿದೆನು; ಅಲ್ಲಿ ನಿನ್ನ ತಾಯಿ ನಿನ್ನನ್ನು ಪಡೆದಳು; ಅಲ್ಲಿ ನಿನ್ನನ್ನು ಹೆತ್ತವಳು ನಿನ್ನನ್ನು ಪಡೆದಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ