೨ ಸಮುವೇಲನು 18:13

ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಮೋಸ ಮಾಡಿಕೊಂಡೆನು. ಯಾಕಂದರೆ ಅರಸನಿಗೆ ಯಾವ ಕಾರ್ಯವಾದರೂ ಬಚ್ಚಿಡಲ್ಪಟ್ಟದ್ದಿಲ್ಲ; ನೀನೇ ನನಗೆ ವಿರೋಧವಾಗಿ ನಿಂತಿರುವಿ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

11ಅದಕ್ಕೆ ಯೋವಾ ಬನು ಅವನಿಗೆ--ಇಗೋ, ನೀನು ನೋಡಿ ಅವನನ್ನು ಯಾಕೆ ಅಲ್ಲಿ ನೆಲಕ್ಕೆ ಹೊಡೆದು ಬಿಡಲಿಲ್ಲ? ನಾನು ನಿನಗೆ ಹತ್ತು ಶೇಕೆಲ್‌ ಬೆಳ್ಳಿಯನ್ನೂ ಒಂದು ನಡು ಕಟ್ಟನ್ನೂ ಕೊಡುತ್ತಿದ್ದೆನು ಅಂದನು.

12ಆದರೆ ಆ ಮನುಷ್ಯನು ಯೋವಾಬನಿಗೆ--ನನ್ನ ಕೈಯಲ್ಲಿ ಸಾವಿರ ಶೆಕೇಲ್‌ ಬೆಳ್ಳಿಯನ್ನು ಕೊಟ್ಟರೂ ನಾನು ಅರಸನ ಮಗನ ಮೇಲೆ ನನ್ನ ಕೈ ಚಾಚುವದಿಲ್ಲ. ಯಾಕಂದರೆಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟದ ಹಾಗೆ ಜಾಗ್ರತೆಯಾಗಿರ್ರಿ ಎಂದು ಅರಸನು ನಿನಗೂ ಅಬೀಷೈನಿಗೂ ಇತ್ತೈಗೂ ನಮಗೆ ಕೇಳಿಸು ವಂತೆ ಆಜ್ಞಾಪಿಸಿದ್ದನು.

13ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಮೋಸ ಮಾಡಿಕೊಂಡೆನು. ಯಾಕಂದರೆ ಅರಸನಿಗೆ ಯಾವ ಕಾರ್ಯವಾದರೂ ಬಚ್ಚಿಡಲ್ಪಟ್ಟದ್ದಿಲ್ಲ; ನೀನೇ ನನಗೆ ವಿರೋಧವಾಗಿ ನಿಂತಿರುವಿ ಅಂದನು.

14ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.

15ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯೌವನಸ್ಥರು ಸುತ್ತಿಕೊಂಡು ಅಬ್ಷಾಲೋಮನನ್ನು ಕೊಂದುಹಾಕಿದರು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी