೨ ಸಮುವೇಲನು 18:12

ಆದರೆ ಆ ಮನುಷ್ಯನು ಯೋವಾಬನಿಗೆ--ನನ್ನ ಕೈಯಲ್ಲಿ ಸಾವಿರ ಶೆಕೇಲ್‌ ಬೆಳ್ಳಿಯನ್ನು ಕೊಟ್ಟರೂ ನಾನು ಅರಸನ ಮಗನ ಮೇಲೆ ನನ್ನ ಕೈ ಚಾಚುವದಿಲ್ಲ. ಯಾಕಂದರೆಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟದ ಹಾಗೆ ಜಾಗ್ರತೆಯಾಗಿರ್ರಿ ಎಂದು ಅರಸನು ನಿನಗೂ ಅಬೀಷೈನಿಗೂ ಇತ್ತೈಗೂ ನಮಗೆ ಕೇಳಿಸು ವಂತೆ ಆಜ್ಞಾಪಿಸಿದ್ದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

10ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.

11ಅದಕ್ಕೆ ಯೋವಾ ಬನು ಅವನಿಗೆ--ಇಗೋ, ನೀನು ನೋಡಿ ಅವನನ್ನು ಯಾಕೆ ಅಲ್ಲಿ ನೆಲಕ್ಕೆ ಹೊಡೆದು ಬಿಡಲಿಲ್ಲ? ನಾನು ನಿನಗೆ ಹತ್ತು ಶೇಕೆಲ್‌ ಬೆಳ್ಳಿಯನ್ನೂ ಒಂದು ನಡು ಕಟ್ಟನ್ನೂ ಕೊಡುತ್ತಿದ್ದೆನು ಅಂದನು.

12ಆದರೆ ಆ ಮನುಷ್ಯನು ಯೋವಾಬನಿಗೆ--ನನ್ನ ಕೈಯಲ್ಲಿ ಸಾವಿರ ಶೆಕೇಲ್‌ ಬೆಳ್ಳಿಯನ್ನು ಕೊಟ್ಟರೂ ನಾನು ಅರಸನ ಮಗನ ಮೇಲೆ ನನ್ನ ಕೈ ಚಾಚುವದಿಲ್ಲ. ಯಾಕಂದರೆಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟದ ಹಾಗೆ ಜಾಗ್ರತೆಯಾಗಿರ್ರಿ ಎಂದು ಅರಸನು ನಿನಗೂ ಅಬೀಷೈನಿಗೂ ಇತ್ತೈಗೂ ನಮಗೆ ಕೇಳಿಸು ವಂತೆ ಆಜ್ಞಾಪಿಸಿದ್ದನು.

13ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಮೋಸ ಮಾಡಿಕೊಂಡೆನು. ಯಾಕಂದರೆ ಅರಸನಿಗೆ ಯಾವ ಕಾರ್ಯವಾದರೂ ಬಚ್ಚಿಡಲ್ಪಟ್ಟದ್ದಿಲ್ಲ; ನೀನೇ ನನಗೆ ವಿರೋಧವಾಗಿ ನಿಂತಿರುವಿ ಅಂದನು.

14ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी