೨ ಸಮುವೇಲನು 18:15

ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯೌವನಸ್ಥರು ಸುತ್ತಿಕೊಂಡು ಅಬ್ಷಾಲೋಮನನ್ನು ಕೊಂದುಹಾಕಿದರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

13ಹಾಗಿರುವಾಗ ನಾನೇ ನನ್ನ ಪ್ರಾಣಕ್ಕೆ ಮೋಸ ಮಾಡಿಕೊಂಡೆನು. ಯಾಕಂದರೆ ಅರಸನಿಗೆ ಯಾವ ಕಾರ್ಯವಾದರೂ ಬಚ್ಚಿಡಲ್ಪಟ್ಟದ್ದಿಲ್ಲ; ನೀನೇ ನನಗೆ ವಿರೋಧವಾಗಿ ನಿಂತಿರುವಿ ಅಂದನು.

14ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.

15ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯೌವನಸ್ಥರು ಸುತ್ತಿಕೊಂಡು ಅಬ್ಷಾಲೋಮನನ್ನು ಕೊಂದುಹಾಕಿದರು.

16ಯೋವಾಬನು ತುತೂರಿಯನ್ನು ಊದಿದ್ದರಿಂದ ಜನರು ಇಸ್ರಾಯೇಲ್ಯರನ್ನು ಹಿಂದಟ್ಟುವದನ್ನು ಬಿಟ್ಟು ಹಿಂತಿರುಗಿದರು.

17ಯೋವಾಬನು ಜನರನ್ನು ತಡೆ ದನು. ಅವರು ಅಬ್ಷಾಲೋಮನನ್ನು ತಕ್ಕೊಂಡು ಅಡವಿ ಯಲ್ಲಿರುವ ಒಂದು ದೊಡ್ಡ ಕುಣಿಯಲ್ಲಿ ಹಾಕಿ ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆಗ ಇಸ್ರಾಯೇಲ್ಯರೆಲ್ಲರೂ ತಮ್ಮ ಗುಡಾರಗಳಿಗೆ ಓಡಿ ಹೋದರು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी