೨ ಸಮುವೇಲನು 24:12

ನೀನು ಹೋಗಿ ದಾವೀದ ನಿಗೆ--ಮೂರು ವಿಷಯಗಳನ್ನು ನಾನು ನಿನ್ನ ಮುಂದೆ ಇಡುವೆನು. ನಾನು ನಿನಗೆ ಮಾಡುವ ಹಾಗೆ ಅವುಗ ಳಲ್ಲಿ ಒಂದನ್ನು ಆದುಕೋ ಎಂದು ಕರ್ತನು ಹೇಳು ತ್ತಾನೆ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 24

10ಆದರೆ ದಾವೀದನು ಜನರನ್ನು ಲೆಕ್ಕಿಸಿದ ತರು ವಾಯ ಅವನು ತನ್ನ ಹೃದಯದಲ್ಲಿ ತಿವಿಯಲ್ಪಟ್ಟನು. ಆದದರಿಂದ ದಾವೀದನು ಕರ್ತನಿಗೆ--ನಾನು ಮಾಡಿ ದ್ದರಲ್ಲಿ ಮಹಾ ಪಾಪಮಾಡಿದೆನು. ಕರ್ತನೇ, ದಯ ಮಾಡಿ ನಿನ್ನ ಸೇವಕನ ಅಕ್ರಮವನ್ನು ಪರಿಹರಿಸು; ನಾನು ಬಹಳ ಹುಚ್ಚುತನ ಮಾಡಿದೆನು ಅಂದನು.

11ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದ್‌ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ--

12ನೀನು ಹೋಗಿ ದಾವೀದ ನಿಗೆ--ಮೂರು ವಿಷಯಗಳನ್ನು ನಾನು ನಿನ್ನ ಮುಂದೆ ಇಡುವೆನು. ನಾನು ನಿನಗೆ ಮಾಡುವ ಹಾಗೆ ಅವುಗ ಳಲ್ಲಿ ಒಂದನ್ನು ಆದುಕೋ ಎಂದು ಕರ್ತನು ಹೇಳು ತ್ತಾನೆ ಅಂದನು.

13ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನಿನ್ನ ದೇಶದಲ್ಲಿ ನಿನಗೆ ಏಳು ವರುಷ ಬರವು ಆಗಬೇಕೋ ಇಲ್ಲವೆ ಮೂರು ತಿಂಗಳು ನಿನ್ನ ಶತ್ರುಗಳು ನಿನ್ನನ್ನು ಹಿಂದಟ್ಟುವಾಗ ನೀನು ಅವರ ಮುಂದೆ ಓಡಿಹೋಗಬೇಕೋ? ಇಲ್ಲವೆ ನಿನ್ನ ದೇಶದಲ್ಲಿ ಮೂರು ದಿವಸ ಬಾಧೆ ಉಂಟಾಗಬೇಕೋ? ಈಗ ನನ್ನನ್ನು ಕಳುಹಿಸಿದಾತನಿಗೆ ನಾನು ಏನು ಪ್ರತ್ಯುತ್ತರ ತಕ್ಕೊಂಡು ಹೋಗಬೇಕು ಯೋಚಿಸಿನೋಡು ಅಂದನು.

14ಆಗ ದಾವೀದನು ಗಾದನಿಗೆ--ನಾನು ಬಹು ಇಕ್ಕಟ್ಟಿನಲ್ಲಿದ್ದೇನೆ. ಈಗ ಕರ್ತನ ಕೈಯಲ್ಲಿ ಬೀಳುವೆವು; ಯಾಕಂದರೆ ಆತನ ಕರುಣೆಯು ಬಹಳವಾಗಿದೆ; ಮನುಷ್ಯರ ಕೈಯಲ್ಲಿ ಬೀಳೆನು ಅಂದನು.

೨ ಸಮುವೇಲನು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी