೨ ಸಮುವೇಲನು 24:14

ಆಗ ದಾವೀದನು ಗಾದನಿಗೆ--ನಾನು ಬಹು ಇಕ್ಕಟ್ಟಿನಲ್ಲಿದ್ದೇನೆ. ಈಗ ಕರ್ತನ ಕೈಯಲ್ಲಿ ಬೀಳುವೆವು; ಯಾಕಂದರೆ ಆತನ ಕರುಣೆಯು ಬಹಳವಾಗಿದೆ; ಮನುಷ್ಯರ ಕೈಯಲ್ಲಿ ಬೀಳೆನು ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 24

12ನೀನು ಹೋಗಿ ದಾವೀದ ನಿಗೆ--ಮೂರು ವಿಷಯಗಳನ್ನು ನಾನು ನಿನ್ನ ಮುಂದೆ ಇಡುವೆನು. ನಾನು ನಿನಗೆ ಮಾಡುವ ಹಾಗೆ ಅವುಗ ಳಲ್ಲಿ ಒಂದನ್ನು ಆದುಕೋ ಎಂದು ಕರ್ತನು ಹೇಳು ತ್ತಾನೆ ಅಂದನು.

13ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನಿನ್ನ ದೇಶದಲ್ಲಿ ನಿನಗೆ ಏಳು ವರುಷ ಬರವು ಆಗಬೇಕೋ ಇಲ್ಲವೆ ಮೂರು ತಿಂಗಳು ನಿನ್ನ ಶತ್ರುಗಳು ನಿನ್ನನ್ನು ಹಿಂದಟ್ಟುವಾಗ ನೀನು ಅವರ ಮುಂದೆ ಓಡಿಹೋಗಬೇಕೋ? ಇಲ್ಲವೆ ನಿನ್ನ ದೇಶದಲ್ಲಿ ಮೂರು ದಿವಸ ಬಾಧೆ ಉಂಟಾಗಬೇಕೋ? ಈಗ ನನ್ನನ್ನು ಕಳುಹಿಸಿದಾತನಿಗೆ ನಾನು ಏನು ಪ್ರತ್ಯುತ್ತರ ತಕ್ಕೊಂಡು ಹೋಗಬೇಕು ಯೋಚಿಸಿನೋಡು ಅಂದನು.

14ಆಗ ದಾವೀದನು ಗಾದನಿಗೆ--ನಾನು ಬಹು ಇಕ್ಕಟ್ಟಿನಲ್ಲಿದ್ದೇನೆ. ಈಗ ಕರ್ತನ ಕೈಯಲ್ಲಿ ಬೀಳುವೆವು; ಯಾಕಂದರೆ ಆತನ ಕರುಣೆಯು ಬಹಳವಾಗಿದೆ; ಮನುಷ್ಯರ ಕೈಯಲ್ಲಿ ಬೀಳೆನು ಅಂದನು.

15ಹಾಗೆಯೇ ಕರ್ತನು ಉದಯ ಕಾಲದಿಂದ ನೇಮಿಸಿದ ಕಾಲದ ವರೆಗೂ ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು. ಆದದರಿಂದ ದಾನಿ ಬನಿಂದ ಬೆರ್ಷೆಬದ ವರೆಗೂ ಇರುವ ಜನರಲ್ಲಿ ಎಪ್ಪತ್ತುಸಾವಿರ ಜನರು ಸತ್ತುಹೋದರು.

16ಆದರೆ ದೂತನು ಯೆರೂಸಲೇಮನ್ನು ಹಾಳುಮಾಡಲು ಅದರ ಮೇಲೆ ತನ್ನ ಕೈಚಾಚಿದಾಗ ಕರ್ತನು ಆ ಕೇಡಿಗೆ ಪಶ್ಚಾತ್ತಾಪಪಟ್ಟು ಜನರನ್ನು ನಾಶಮಾಡುವ ದೂತನಿಗೆಸಾಕು; ಈಗ ನಿನ್ನ ಕೈಯನ್ನು ಹಿಂದೆ ತಕ್ಕೋ ಅಂದನು.

೨ ಸಮುವೇಲನು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी