ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ--
9ಯೋವಾಬನು ಅರಸನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನಂದರೆ, ಇಸ್ರಾಯೇಲ್ಯರಲ್ಲಿ ಕತ್ತಿ ಹಿಡಿಯತಕ್ಕ ಪರಾಕ್ರಮವುಳ್ಳ ಎಂಟು ಲಕ್ಷ ಮಂದಿ ಇದ್ದರು. ಯೆಹೂದದ ಜನರು ಐದು ಲಕ್ಷ ಮಂದಿಯಾಗಿದ್ದರು.
10ಆದರೆ ದಾವೀದನು ಜನರನ್ನು ಲೆಕ್ಕಿಸಿದ ತರು ವಾಯ ಅವನು ತನ್ನ ಹೃದಯದಲ್ಲಿ ತಿವಿಯಲ್ಪಟ್ಟನು. ಆದದರಿಂದ ದಾವೀದನು ಕರ್ತನಿಗೆ--ನಾನು ಮಾಡಿ ದ್ದರಲ್ಲಿ ಮಹಾ ಪಾಪಮಾಡಿದೆನು. ಕರ್ತನೇ, ದಯ ಮಾಡಿ ನಿನ್ನ ಸೇವಕನ ಅಕ್ರಮವನ್ನು ಪರಿಹರಿಸು; ನಾನು ಬಹಳ ಹುಚ್ಚುತನ ಮಾಡಿದೆನು ಅಂದನು.
11ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ--
12ನೀನು ಹೋಗಿ ದಾವೀದ ನಿಗೆ--ಮೂರು ವಿಷಯಗಳನ್ನು ನಾನು ನಿನ್ನ ಮುಂದೆ ಇಡುವೆನು. ನಾನು ನಿನಗೆ ಮಾಡುವ ಹಾಗೆ ಅವುಗ ಳಲ್ಲಿ ಒಂದನ್ನು ಆದುಕೋ ಎಂದು ಕರ್ತನು ಹೇಳು ತ್ತಾನೆ ಅಂದನು.
13ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನಿನ್ನ ದೇಶದಲ್ಲಿ ನಿನಗೆ ಏಳು ವರುಷ ಬರವು ಆಗಬೇಕೋ ಇಲ್ಲವೆ ಮೂರು ತಿಂಗಳು ನಿನ್ನ ಶತ್ರುಗಳು ನಿನ್ನನ್ನು ಹಿಂದಟ್ಟುವಾಗ ನೀನು ಅವರ ಮುಂದೆ ಓಡಿಹೋಗಬೇಕೋ? ಇಲ್ಲವೆ ನಿನ್ನ ದೇಶದಲ್ಲಿ ಮೂರು ದಿವಸ ಬಾಧೆ ಉಂಟಾಗಬೇಕೋ? ಈಗ ನನ್ನನ್ನು ಕಳುಹಿಸಿದಾತನಿಗೆ ನಾನು ಏನು ಪ್ರತ್ಯುತ್ತರ ತಕ್ಕೊಂಡು ಹೋಗಬೇಕು ಯೋಚಿಸಿನೋಡು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ