೨ ಸಮುವೇಲನು 24:19

ಆಗ ದಾವೀದನು ಗಾದನು ಹೇಳಿದ ಹಾಗೆಯೇ ಕರ್ತನು ಆಜ್ಞಾಪಿಸಿದ ಪ್ರಕಾರವೇ ಹೋದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 24

17ಆಗ ಕರ್ತನ ದೂತನು ಯೆಬೂಸಿ ಯನಾದ ಅರೌನನು ತುಳಿಸುವ ಕಣದ ಬಳಿಯಲ್ಲಿ ಇದ್ದನು. ದಾವೀದನು ಜನಸಂಹಾರ ದೂತನನ್ನು ನೋಡಿದಾಗ ಅವನು ಕರ್ತನಿಗೆ--ಇಗೋ, ನಾನೇ ಪಾಪಮಾಡಿದೆನು; ದುಷ್ಟತ್ವದಿಂದ ಮಾಡಿದವನು ನಾನೇ; ಆದರೆ ಈ ಕುರಿಗಳಂತಿರುವ ಜನರು ಮಾಡಿ ದ್ದೇನು? ನಿನ್ನ ಕೈ ನನಗೆ ವಿರೋಧವಾಗಿಯೂ ನನ್ನ ತಂದೆಯ ಮನೆಗೆ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ ಅಂದನು.

18ಅದೇ ದಿವಸದಲ್ಲಿ ಪ್ರವಾದಿಯಾದ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸು ಅಂದನು.

19ಆಗ ದಾವೀದನು ಗಾದನು ಹೇಳಿದ ಹಾಗೆಯೇ ಕರ್ತನು ಆಜ್ಞಾಪಿಸಿದ ಪ್ರಕಾರವೇ ಹೋದನು.

20ಆದರೆ ಅರೌನನು ಕಣ್ಣೆತ್ತಿ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ನೋಡಿದನು; ಆಗ ಅರೌನನು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅರೌನನುಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು ಅಂದನು.

21ಅದಕ್ಕೆ ದಾವೀ ದನು--ಈ ಬಾಧೆಯು ಜನರ ಕಡೆಯಿಂದ ತಡೆ ಯಲ್ಪಡುವ ಹಾಗೆ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸುವದಕ್ಕೆ ಈ ಕಣವನ್ನು ನಿನ್ನಿಂದ ಕೊಂಡು ಕೊಳ್ಳಲು ಬಂದಿದ್ದೇನೆ ಅಂದನು.

೨ ಸಮುವೇಲನು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी