೨ ಸಮುವೇಲನು 24:20

ಆದರೆ ಅರೌನನು ಕಣ್ಣೆತ್ತಿ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ನೋಡಿದನು; ಆಗ ಅರೌನನು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅರೌನನುಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 24

18ಅದೇ ದಿವಸದಲ್ಲಿ ಪ್ರವಾದಿಯಾದ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸು ಅಂದನು.

19ಆಗ ದಾವೀದನು ಗಾದನು ಹೇಳಿದ ಹಾಗೆಯೇ ಕರ್ತನು ಆಜ್ಞಾಪಿಸಿದ ಪ್ರಕಾರವೇ ಹೋದನು.

20ಆದರೆ ಅರೌನನು ಕಣ್ಣೆತ್ತಿ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ನೋಡಿದನು; ಆಗ ಅರೌನನು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅರೌನನುಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು ಅಂದನು.

21ಅದಕ್ಕೆ ದಾವೀ ದನು--ಈ ಬಾಧೆಯು ಜನರ ಕಡೆಯಿಂದ ತಡೆ ಯಲ್ಪಡುವ ಹಾಗೆ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸುವದಕ್ಕೆ ಈ ಕಣವನ್ನು ನಿನ್ನಿಂದ ಕೊಂಡು ಕೊಳ್ಳಲು ಬಂದಿದ್ದೇನೆ ಅಂದನು.

22ಅರೌನನು ದಾವೀದನಿಗೆ--ಅರಸನಾದ ನನ್ನ ಒಡೆಯನು ಅದನ್ನು ತಕ್ಕೊಂಡು ತನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅರ್ಪಿಸಲಿ; ಇಗೋ, ದಹನಬಲಿಗೋಸ್ಕರ ಎತ್ತು ಗಳೂ ಕಟ್ಟಿಗೆಗಳಿಗೋಸ್ಕರ ಹಂತಿ ದೂಡುವ ಸಾಮಾನೂ ಬಾತಿ ಮುಟ್ಟುಗಳೂ ಇಲ್ಲಿ ಅವೆ ಅಂದನು.

೨ ಸಮುವೇಲನು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी