೨ ಸಮುವೇಲನು 24:22

ಅರೌನನು ದಾವೀದನಿಗೆ--ಅರಸನಾದ ನನ್ನ ಒಡೆಯನು ಅದನ್ನು ತಕ್ಕೊಂಡು ತನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅರ್ಪಿಸಲಿ; ಇಗೋ, ದಹನಬಲಿಗೋಸ್ಕರ ಎತ್ತು ಗಳೂ ಕಟ್ಟಿಗೆಗಳಿಗೋಸ್ಕರ ಹಂತಿ ದೂಡುವ ಸಾಮಾನೂ ಬಾತಿ ಮುಟ್ಟುಗಳೂ ಇಲ್ಲಿ ಅವೆ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 24

20ಆದರೆ ಅರೌನನು ಕಣ್ಣೆತ್ತಿ ಅರಸನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ನೋಡಿದನು; ಆಗ ಅರೌನನು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅರೌನನುಅರಸನಾದ ನನ್ನ ಒಡೆಯನು ತನ್ನ ಸೇವಕನ ಬಳಿಗೆ ಬಂದದ್ದೇನು ಅಂದನು.

21ಅದಕ್ಕೆ ದಾವೀ ದನು--ಈ ಬಾಧೆಯು ಜನರ ಕಡೆಯಿಂದ ತಡೆ ಯಲ್ಪಡುವ ಹಾಗೆ ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸುವದಕ್ಕೆ ಈ ಕಣವನ್ನು ನಿನ್ನಿಂದ ಕೊಂಡು ಕೊಳ್ಳಲು ಬಂದಿದ್ದೇನೆ ಅಂದನು.

22ಅರೌನನು ದಾವೀದನಿಗೆ--ಅರಸನಾದ ನನ್ನ ಒಡೆಯನು ಅದನ್ನು ತಕ್ಕೊಂಡು ತನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅರ್ಪಿಸಲಿ; ಇಗೋ, ದಹನಬಲಿಗೋಸ್ಕರ ಎತ್ತು ಗಳೂ ಕಟ್ಟಿಗೆಗಳಿಗೋಸ್ಕರ ಹಂತಿ ದೂಡುವ ಸಾಮಾನೂ ಬಾತಿ ಮುಟ್ಟುಗಳೂ ಇಲ್ಲಿ ಅವೆ ಅಂದನು.

23ಅರೌನನು ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಟ್ಟೆನು. ಇದಲ್ಲದೆ ಅರೌನನು ಅರಸನಿಗೆ--ನಿನ್ನ ದೇವರಾದ ಕರ್ತನು ನಿನ್ನನ್ನು ಅಂಗೀಕರಿಸಲಿ ಅಂದನು.

24ಆದರೆ ಅರಸನು ಅರೌನನಿಗೆ--ಹಾಗಲ್ಲ; ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ; ಉಚಿತವಾಗಿ ಬಂದ ದಹನ ಬಲಿಗಳನ್ನು ನನ್ನ ದೇವರಾದ ಕರ್ತನಿಗೆ ಅರ್ಪಿ ಸೆನು ಅಂದನು. ಹೀಗೆ ದಾವೀದನು ಆ ಕಣವನ್ನೂ ಎತ್ತುಗಳನ್ನೂ ಐವತ್ತು ಶೇಕೆಲ್‌ ಬೆಳ್ಳಿಗೆ ಕೊಂಡು ಕೊಂಡನು.

೨ ಸಮುವೇಲನು 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी