ಕಣವು ಮತ್ತು ದ್ರಾಕ್ಷೆಯ ತೋಟವು ಅವರನ್ನು ಪೋಷಿಸುವದಿಲ್ಲ; ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವದು.
1ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.
2ಕಣವು ಮತ್ತು ದ್ರಾಕ್ಷೆಯ ತೋಟವು ಅವರನ್ನು ಪೋಷಿಸುವದಿಲ್ಲ; ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವದು.
3ಅವರು ಕರ್ತನ ದೇಶದಲ್ಲಿ ನೆಲೆಸುವದಿಲ್ಲ; ಆದರೆ ಎಫ್ರಾಯಾಮು ಐಗುಪ್ತಕ್ಕೆ ತಿರುಗುವದು; ಅವರು ಅಶ್ಯೂರಿನಲ್ಲಿ ಅಶುದ್ಧ ವಾದವುಗಳನ್ನು ತಿನ್ನುವರು.
4ಅವರು ದ್ರಾಕ್ಷಾರಸ ವನ್ನು ಕಾಣಿಕೆಯಾಗಿ ಕರ್ತನಿಗೆ ಅರ್ಪಿಸುವದಿಲ್ಲ, ಇಲ್ಲವೆ ಅವರು ಆತನಿಗೆ ಮೆಚ್ಚಿಕೆಯಾಗಿರುವದಿಲ್ಲ; ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿ ರುವವು; ಅದನ್ನು ತಿನ್ನುವವರೆಲ್ಲರೂ ಅಪವಿತ್ರ ರಾಗುವರು. ಅವರ ಪ್ರಾಣಕ್ಕಾಗಿರುವ ಅವರ ರೊಟ್ಟಿಯು ಕರ್ತನ ಆಲಯಕ್ಕೆ ಬರುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ