ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ಪಾಪಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.
20ಈ ಪ್ರಕಾರ ನೀನು ತಿಂಗಳಿನ ಏಳನೇ ದಿನದಲ್ಲಿ ತಪ್ಪಿ ಹೋಗುವ ಎಲ್ಲರಿಗಾಗಿಯೂ ಬುದ್ಧಿ ಹೀನರಿಗಾಗಿಯೂ ಮಾಡಬೇಕು. ಹೀಗೆ ನೀವು ಆಲಯಕ್ಕೋಸ್ಕರವಾಗಿ ಸಮಾಧಾನಪಡಿಸಬೇಕು.
21ಮೊದಲನೇ ತಿಂಗಳಿನ ಹದಿನಾಲ್ಕನೇ ದಿನದಲ್ಲಿ ನಿಮಗೆ ಏಳು ದಿನಗಳ ಹಬ್ಬವಾಗಿರುವ ಪಸ್ಕ ಹಬ್ಬವು ಇರಬೇಕು; ಅದರಲ್ಲಿ ನೀವು ಹುಳಿಯಿಲ್ಲದ ರೊಟ್ಟಿ ಯನ್ನು ತಿನ್ನಬೇಕು.
22ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ಪಾಪಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.
23ಹಬ್ಬದ ಏಳು ದಿವಸಗಳಲ್ಲಿ ಪ್ರತಿ ದಿನವೂ ಅವನು ಕರ್ತನಿಗೆ ದಹನಬಲಿಗಾಗಿ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಮತ್ತು ಪ್ರತಿ ದಿನವೂ ಪಾಪಬಲಿಗಾಗಿ ಮೇಕೆಯ ಮರಿಯನ್ನೂ ಸಿದ್ಧಮಾಡಬೇಕು;
24ಅವನು ಹೋರಿಗೆ ಒಂದು ಏಫ, ಟಗರಿಗೆ ಒಂದು ಏಫ, ಈ ಪ್ರಕಾರ ಆಹಾರ ಅರ್ಪಣೆಯನ್ನೂ, ಏಫಕ್ಕೆ ಒಂದು ಹಿನ್ನು ಎಣ್ಣೆಯನ್ನೂ ಸಿದ್ಧಮಾಡಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ