ಯೆಹೆಜ್ಕೇಲನು 45:20

ಈ ಪ್ರಕಾರ ನೀನು ತಿಂಗಳಿನ ಏಳನೇ ದಿನದಲ್ಲಿ ತಪ್ಪಿ ಹೋಗುವ ಎಲ್ಲರಿಗಾಗಿಯೂ ಬುದ್ಧಿ ಹೀನರಿಗಾಗಿಯೂ ಮಾಡಬೇಕು. ಹೀಗೆ ನೀವು ಆಲಯಕ್ಕೋಸ್ಕರವಾಗಿ ಸಮಾಧಾನಪಡಿಸಬೇಕು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 45

18ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮೊದಲನೇ ತಿಂಗಳಿನ ಮೊದಲನೇ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೇಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡ ಬೇಕು.

19ಯಾಜಕನು ಪಾಪಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆ ಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;

20ಈ ಪ್ರಕಾರ ನೀನು ತಿಂಗಳಿನ ಏಳನೇ ದಿನದಲ್ಲಿ ತಪ್ಪಿ ಹೋಗುವ ಎಲ್ಲರಿಗಾಗಿಯೂ ಬುದ್ಧಿ ಹೀನರಿಗಾಗಿಯೂ ಮಾಡಬೇಕು. ಹೀಗೆ ನೀವು ಆಲಯಕ್ಕೋಸ್ಕರವಾಗಿ ಸಮಾಧಾನಪಡಿಸಬೇಕು.

21ಮೊದಲನೇ ತಿಂಗಳಿನ ಹದಿನಾಲ್ಕನೇ ದಿನದಲ್ಲಿ ನಿಮಗೆ ಏಳು ದಿನಗಳ ಹಬ್ಬವಾಗಿರುವ ಪಸ್ಕ ಹಬ್ಬವು ಇರಬೇಕು; ಅದರಲ್ಲಿ ನೀವು ಹುಳಿಯಿಲ್ಲದ ರೊಟ್ಟಿ ಯನ್ನು ತಿನ್ನಬೇಕು.

22ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ಪಾಪಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.

ಯೆಹೆಜ್ಕೇಲನು 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी