ಯೆರೆಮಿಯ 41:8

ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 41

6ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು; ಅವರನ್ನು ಎದುರುಗೊಂಡ ಮೇಲೆ ಅವರಿಗೆ--ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಬನ್ನಿ ಅಂದನು.

7ಆಗ ಆದದ್ದೇನಂದರೆ--ಅವರು ಪಟ್ಟಣದ ಮಧ್ಯಕ್ಕೆ ಬಂದಾಗ ನೆತನ್ಯನ ಮಗನಾದ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು ಕುಣಿಯೊಳಗೆ ಹಾಕಿಬಿಟ್ಟರು.

8ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ.

9ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದು ಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಕುಣಿಯು ಯಾವದಂದರೆ--ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಮಾಡಿದ್ದೇ; ಇದನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ ವರಿಂದ ತುಂಬಿಸಿದನು.

10ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.

ಯೆರೆಮಿಯ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी