ಯೆರೆಮಿಯ 41:10

ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 41

8ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ.

9ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದು ಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಕುಣಿಯು ಯಾವದಂದರೆ--ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಮಾಡಿದ್ದೇ; ಇದನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ ವರಿಂದ ತುಂಬಿಸಿದನು.

10ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.

11ಆದರೆ ಕಾರೇಹನ ಮಗನಾದ ಯೋಹಾನಾ ನನೂ ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ್ದ ಕೇಡನ್ನೆಲ್ಲಾ ಕೇಳಿದ ಮೇಲೆ

12ಆ ಮನುಷ್ಯರನ್ನೆಲ್ಲಾ ಕರಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಸಂಗಡ ಯುದ್ಧ ಮಾಡುವದಕ್ಕೆ ಹೋಗಿ ಗಿಬ್ಯೋನಿ ನಲ್ಲಿರುವ ದೊಡ್ಡ ನೀರುಗಳ ಬಳಿಯಲ್ಲಿ ಅವನನ್ನು ಕಂಡರು.

ಯೆರೆಮಿಯ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी