ಯೆರೆಮಿಯ 41:6

ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು; ಅವರನ್ನು ಎದುರುಗೊಂಡ ಮೇಲೆ ಅವರಿಗೆ--ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಬನ್ನಿ ಅಂದನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 41

4ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೇ ದಿನದಲ್ಲಿ ಅದು ಯಾರಿಗೂ ತಿಳಿಯದಿರುವಾಗ

5ಶೆಕೆಮ್‌ನಿಂದಲೂ ಶಿಲೋವಿನಿಂದಲೂ ಸಮಾರ್ಯ ದಿಂದಲೂ ಎಂಭತ್ತು ಮಂದಿ ಮನುಷ್ಯರು ಗಡ್ಡವನ್ನು ಕ್ಷೌರಮಾಡಿದವರಾಗಿಯೂ ವಸ್ತ್ರಗಳನ್ನು ಹರಕೊಂಡವ ರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಕರ್ತನ ಆಲಯಕ್ಕೆ ತರುವದಕ್ಕೋಸ್ಕರ ಕಾಣಿಕೆಯನ್ನೂ ಧೂಪವನ್ನೂ ಕೈಯಲ್ಲಿ ತಕ್ಕೊಂಡು ಬಂದರು.

6ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು; ಅವರನ್ನು ಎದುರುಗೊಂಡ ಮೇಲೆ ಅವರಿಗೆ--ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಬನ್ನಿ ಅಂದನು.

7ಆಗ ಆದದ್ದೇನಂದರೆ--ಅವರು ಪಟ್ಟಣದ ಮಧ್ಯಕ್ಕೆ ಬಂದಾಗ ನೆತನ್ಯನ ಮಗನಾದ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು ಕುಣಿಯೊಳಗೆ ಹಾಕಿಬಿಟ್ಟರು.

8ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ.

ಯೆರೆಮಿಯ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी