ಯೆರೆಮಿಯ 41:4

ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೇ ದಿನದಲ್ಲಿ ಅದು ಯಾರಿಗೂ ತಿಳಿಯದಿರುವಾಗ

ಸಂದರ್ಭದೊಂದಿಗೆ ಓದಿ · ಯೆರೆಮಿಯ 41

2ಆಗ ನೆತನ್ಯನ ಮಗನಾದ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಮಂದಿ ಮನುಷ್ಯರ ಸಹಿತವಾಗಿ ಎದ್ದು ಬಾಬೆಲಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದುಹಾಕಿ ದರು.

3ಇದಲ್ಲದೆ ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನೂ ಅಲ್ಲಿ ಸಿಕ್ಕಿದ ಕಸ್ದೀಯರೆಲ್ಲರನ್ನೂ ಯುದ್ಧಸ್ಥರನ್ನೂ ಇಷ್ಮಾಯೇಲನು ಕೊಂದುಹಾಕಿದನು.

4ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೇ ದಿನದಲ್ಲಿ ಅದು ಯಾರಿಗೂ ತಿಳಿಯದಿರುವಾಗ

5ಶೆಕೆಮ್‌ನಿಂದಲೂ ಶಿಲೋವಿನಿಂದಲೂ ಸಮಾರ್ಯ ದಿಂದಲೂ ಎಂಭತ್ತು ಮಂದಿ ಮನುಷ್ಯರು ಗಡ್ಡವನ್ನು ಕ್ಷೌರಮಾಡಿದವರಾಗಿಯೂ ವಸ್ತ್ರಗಳನ್ನು ಹರಕೊಂಡವ ರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಕರ್ತನ ಆಲಯಕ್ಕೆ ತರುವದಕ್ಕೋಸ್ಕರ ಕಾಣಿಕೆಯನ್ನೂ ಧೂಪವನ್ನೂ ಕೈಯಲ್ಲಿ ತಕ್ಕೊಂಡು ಬಂದರು.

6ಆಗ ನೆತನ್ಯನ ಮಗನಾದ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು; ಅವರನ್ನು ಎದುರುಗೊಂಡ ಮೇಲೆ ಅವರಿಗೆ--ಅಹೀಕಾ ಮನ ಮಗನಾದ ಗೆದಲ್ಯನ ಬಳಿಗೆ ಬನ್ನಿ ಅಂದನು.

ಯೆರೆಮಿಯ 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी