ಯೆಹೆಜ್ಕೇಲನು 38:6

ಗೋಮೆರ್‌ ಮತ್ತು ಅವನ ಎಲ್ಲಾ ದಳಗಳನ್ನು ಉತ್ತರ ದಿಕ್ಕಿನ ತೋಗರ್ಮನ ಮನೆತನದವರನ್ನೂ ಅವನ ಎಲ್ಲಾ ದಳಗಳನ್ನೂ ನಿನ್ನ ಸಂಗಡವಿರುವ ಅನೇಕ ಜನರನ್ನೂ ಹೊರಗೆ ತರುವೆನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 38

4ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು.

5ಅವರೊಂದಿಗೆ ಪರ್ಷಿಯಾ ಇಥಿಯೋಪ್ಯ ಲಿಬಿಯಾ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.

6ಗೋಮೆರ್‌ ಮತ್ತು ಅವನ ಎಲ್ಲಾ ದಳಗಳನ್ನು ಉತ್ತರ ದಿಕ್ಕಿನ ತೋಗರ್ಮನ ಮನೆತನದವರನ್ನೂ ಅವನ ಎಲ್ಲಾ ದಳಗಳನ್ನೂ ನಿನ್ನ ಸಂಗಡವಿರುವ ಅನೇಕ ಜನರನ್ನೂ ಹೊರಗೆ ತರುವೆನು.

7ನೀನು ಸಿದ್ಧನಾಗಿ ನಿನ್ನ ಸಂಗಡ ಕೂಡಿ ಬಂದಿರುವ ನಿನ್ನ ಎಲ್ಲಾ ಕೂಟಗಳನ್ನು ಸಿದ್ಧಮಾಡಿಕೊಂಡು ನೀನು ಅವರಿಗೆ ಕಾವಲಿರು.

8ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್‌ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ.

ಯೆಹೆಜ್ಕೇಲನು 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी