ಯೆಹೆಜ್ಕೇಲನು 38:4

ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 38

2ಮನುಷ್ಯಪುತ್ರನೇ, ಮೆಷೆಕ್‌ ಮತ್ತು ತೂಬಲಿನವರಿಗೆ ಮುಖ್ಯ ಪ್ರಭುಗಳಾ ಗಿರುವ ಮಾಗೋಗ್‌ ದೇಶದ ಗೋಗನಿಗೆ ನೀನು ಅಭಿಮುಖನಾಗಿ ಅವನಿಗೆ ವಿರುದ್ಧವಾಗಿ ಪ್ರವಾದಿಸು

3ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮೆಷೆಕ್‌ ತೂಬಲಿಗೆ ಮುಖ್ಯ ಪ್ರಭುವಾದ ಗೋಗನೇ, ನಾನು ನಿನಗೆ ವಿರೋಧವಾಗಿದ್ದೇನೆ.

4ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು.

5ಅವರೊಂದಿಗೆ ಪರ್ಷಿಯಾ ಇಥಿಯೋಪ್ಯ ಲಿಬಿಯಾ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.

6ಗೋಮೆರ್‌ ಮತ್ತು ಅವನ ಎಲ್ಲಾ ದಳಗಳನ್ನು ಉತ್ತರ ದಿಕ್ಕಿನ ತೋಗರ್ಮನ ಮನೆತನದವರನ್ನೂ ಅವನ ಎಲ್ಲಾ ದಳಗಳನ್ನೂ ನಿನ್ನ ಸಂಗಡವಿರುವ ಅನೇಕ ಜನರನ್ನೂ ಹೊರಗೆ ತರುವೆನು.

ಯೆಹೆಜ್ಕೇಲನು 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी