ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ--
24ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವದನ್ನೂ ಕರ್ತನಿಗೆ ಸಮರ್ಪಿಸಬಾರದು. ಅಲ್ಲದೆ ನಿಮ್ಮ ದೇಶದೊಳಗಿರುವ ಅಂಥ ಯಾವ ಸಮರ್ಪಣೆ ಯನ್ನಾ ದರೂ ನೀವು ಸಮರ್ಪಿಸಬಾರದು.
25ಇದಲ್ಲದೆ ಪರಕೀಯನ ಕೈಯೊಳಗಿಂದಲೂ ಅಂಥವುಗಳಲ್ಲಿ ಯಾವದನ್ನಾದರೂ ನಿಮ್ಮ ದೇವರಿಗೆ ರೊಟ್ಟಿಯಾಗಿ ಅರ್ಪಿಸಬಾರದು. ಅವರ ನೀತಿಭ್ರಷ್ಠತೆಯೂ ದೋಷ ಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರ ವಾಗಿ ಅಂಗೀಕಾರವಾಗುವದಿಲ್ಲ.
26ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ--
27ಹೋರಿಯನ್ನಾಗಲಿ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ ಏಳು ದಿವಸಗಳ ವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಕರ್ತನಿಗೆ ದಹನಬಲಿಯಾಗಿ ಅಂಗೀ ಕಾರವಾಗಿರುವದು.
28ಹಸುವನ್ನಾಗಲಿ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ