ಯಾಜಕಕಾಂಡ 22:24

ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವದನ್ನೂ ಕರ್ತನಿಗೆ ಸಮರ್ಪಿಸಬಾರದು. ಅಲ್ಲದೆ ನಿಮ್ಮ ದೇಶದೊಳಗಿರುವ ಅಂಥ ಯಾವ ಸಮರ್ಪಣೆ ಯನ್ನಾ ದರೂ ನೀವು ಸಮರ್ಪಿಸಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 22

22ಕುರುಡಾದದ್ದು, ಮುರಿದದ್ದು, ಅಂಗ ಹೀನವಾದದ್ದು, ಬೊಕ್ಕೆಯುಳ್ಳದ್ದು, ತುರಿಯುಳ್ಳದ್ದು, ಇಲ್ಲವೆ ಹುರುಕುಳ್ಳದ್ದು ಇವುಗಳನ್ನು ನೀವು ಕರ್ತನಿಗೆ ಸಮರ್ಪಿಸಲೂಬಾರದು ಮತ್ತು ಅವುಗಳಿಂದ ಯಜ್ಞ ವೇದಿಯ ಮೇಲೆ ದಹನಬಲಿಯಾಗಿ ಕರ್ತನಿಗೆ ಸಮರ್ಪಿಸಲೂಬಾರದು.

23ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವ ದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆ ಯಿರುವದಾಗಿದ್ದರೆ ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು; ಆದರೆ ಪ್ರಮಾಣಕ್ಕಾಗಿ ಅದು ಅಂಗೀಕಾರವಾಗುವದಿಲ್ಲ.

24ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವದನ್ನೂ ಕರ್ತನಿಗೆ ಸಮರ್ಪಿಸಬಾರದು. ಅಲ್ಲದೆ ನಿಮ್ಮ ದೇಶದೊಳಗಿರುವ ಅಂಥ ಯಾವ ಸಮರ್ಪಣೆ ಯನ್ನಾ ದರೂ ನೀವು ಸಮರ್ಪಿಸಬಾರದು.

25ಇದಲ್ಲದೆ ಪರಕೀಯನ ಕೈಯೊಳಗಿಂದಲೂ ಅಂಥವುಗಳಲ್ಲಿ ಯಾವದನ್ನಾದರೂ ನಿಮ್ಮ ದೇವರಿಗೆ ರೊಟ್ಟಿಯಾಗಿ ಅರ್ಪಿಸಬಾರದು. ಅವರ ನೀತಿಭ್ರಷ್ಠತೆಯೂ ದೋಷ ಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರ ವಾಗಿ ಅಂಗೀಕಾರವಾಗುವದಿಲ್ಲ.

26ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ--

ಯಾಜಕಕಾಂಡ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी