ಧರ್ಮೋಪದೇಶಕಾಂಡ 21:12

ಅವಳನ್ನು ನಿನ್ನ ಮನೆಯೊಳಗೆ ತರಬೇಕು. ಅವಳು ತಲೆ ಬೋಳಿಸಿಕೊಂಡು, ಉಗುರುಗಳನ್ನು ಕತ್ತರಿಸಿ ಕೊಂಡು,

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 21

10ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡಲು ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಕೈಗೆ ಒಪ್ಪಿಸುವದರಿಂದ ನೀನು ಅವರನ್ನು ಸೆರೆ ಹಿಡಿದಾಗ

11ಆ ಸೆರೆಯವರಲ್ಲಿ ಸೌಂದರ್ಯವಾದ ಸ್ತ್ರೀಯನ್ನು ನೋಡಿ ಅವಳನ್ನು ನಿನಗೆ ಹೆಂಡತಿಯಾಗಿ ತಕ್ಕೊಳ್ಳುವಹಾಗೆ ಅವಳ ಮೇಲೆ ಅಪೇಕ್ಷೆಯನ್ನಿಟ್ಟರೆ

12ಅವಳನ್ನು ನಿನ್ನ ಮನೆಯೊಳಗೆ ತರಬೇಕು. ಅವಳು ತಲೆ ಬೋಳಿಸಿಕೊಂಡು, ಉಗುರುಗಳನ್ನು ಕತ್ತರಿಸಿ ಕೊಂಡು,

13ತನ್ನ ಸೆರೆಯ ವಸ್ತ್ರವನ್ನು ತೆಗೆದಿಟ್ಟು ನಿನ್ನ ಮನೆಯಲ್ಲಿ ವಾಸವಾಗಿದ್ದು, ತನ್ನ ತಂದೆತಾಯಿಗಳ ನಿಮಿತ್ತ ಪೂರ್ಣ ತಿಂಗಳು ಗೋಳಾಡಲಿ. ಆ ಮೇಲೆ ನೀನು ಅವಳ ಬಳಿಗೆ ಹೋಗಿ ಅವಳಿಗೆ ಗಂಡನಾಗ ಬಹುದು; ಅವಳು ನಿನಗೆ ಹೆಂಡತಿಯಾಗಿರುವಳು.

14ಆದರೆ ನೀನು ಅವಳನ್ನು ಮೆಚ್ಚದೆ ಹೋದರೆ ಅವಳನ್ನು ಅವಳ ಮನಸ್ಸಿದ್ದಲ್ಲಿಗೆ ಕಳುಹಿಸಿಬಿಡಬೇಕು; ಹೇಗಾದರೂ ಹಣಕ್ಕೆ ಮಾರಲೇಬಾರದು; ನೀನು ಅವಳನ್ನು ತಗ್ಗಿಸಿದ್ದರಿಂದ ಅವಳನ್ನು ದಾಸಿಯ ಹಾಗೆ ನಡಿಸಬಾರದು.

ಧರ್ಮೋಪದೇಶಕಾಂಡ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी