ಧರ್ಮೋಪದೇಶಕಾಂಡ 21:13

ತನ್ನ ಸೆರೆಯ ವಸ್ತ್ರವನ್ನು ತೆಗೆದಿಟ್ಟು ನಿನ್ನ ಮನೆಯಲ್ಲಿ ವಾಸವಾಗಿದ್ದು, ತನ್ನ ತಂದೆತಾಯಿಗಳ ನಿಮಿತ್ತ ಪೂರ್ಣ ತಿಂಗಳು ಗೋಳಾಡಲಿ. ಆ ಮೇಲೆ ನೀನು ಅವಳ ಬಳಿಗೆ ಹೋಗಿ ಅವಳಿಗೆ ಗಂಡನಾಗ ಬಹುದು; ಅವಳು ನಿನಗೆ ಹೆಂಡತಿಯಾಗಿರುವಳು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 21

11ಆ ಸೆರೆಯವರಲ್ಲಿ ಸೌಂದರ್ಯವಾದ ಸ್ತ್ರೀಯನ್ನು ನೋಡಿ ಅವಳನ್ನು ನಿನಗೆ ಹೆಂಡತಿಯಾಗಿ ತಕ್ಕೊಳ್ಳುವಹಾಗೆ ಅವಳ ಮೇಲೆ ಅಪೇಕ್ಷೆಯನ್ನಿಟ್ಟರೆ

12ಅವಳನ್ನು ನಿನ್ನ ಮನೆಯೊಳಗೆ ತರಬೇಕು. ಅವಳು ತಲೆ ಬೋಳಿಸಿಕೊಂಡು, ಉಗುರುಗಳನ್ನು ಕತ್ತರಿಸಿ ಕೊಂಡು,

13ತನ್ನ ಸೆರೆಯ ವಸ್ತ್ರವನ್ನು ತೆಗೆದಿಟ್ಟು ನಿನ್ನ ಮನೆಯಲ್ಲಿ ವಾಸವಾಗಿದ್ದು, ತನ್ನ ತಂದೆತಾಯಿಗಳ ನಿಮಿತ್ತ ಪೂರ್ಣ ತಿಂಗಳು ಗೋಳಾಡಲಿ. ಆ ಮೇಲೆ ನೀನು ಅವಳ ಬಳಿಗೆ ಹೋಗಿ ಅವಳಿಗೆ ಗಂಡನಾಗ ಬಹುದು; ಅವಳು ನಿನಗೆ ಹೆಂಡತಿಯಾಗಿರುವಳು.

14ಆದರೆ ನೀನು ಅವಳನ್ನು ಮೆಚ್ಚದೆ ಹೋದರೆ ಅವಳನ್ನು ಅವಳ ಮನಸ್ಸಿದ್ದಲ್ಲಿಗೆ ಕಳುಹಿಸಿಬಿಡಬೇಕು; ಹೇಗಾದರೂ ಹಣಕ್ಕೆ ಮಾರಲೇಬಾರದು; ನೀನು ಅವಳನ್ನು ತಗ್ಗಿಸಿದ್ದರಿಂದ ಅವಳನ್ನು ದಾಸಿಯ ಹಾಗೆ ನಡಿಸಬಾರದು.

15ಒಬ್ಬ ಮನುಷ್ಯನಿಗೆ ಪ್ರೀತಿಮಾಡಲ್ಪಟ್ಟ ಒಬ್ಬಳೂ ಹಗೆಮಾಡಲ್ಪಟ್ಟ ಒಬ್ಬಳೂ ಇಬ್ಬರು ಪತ್ನಿಯರು ಇರ ಲಾಗಿ ಪ್ರೀತಿಮಾಡಲ್ಪಟ್ಟವಳೂ ಹಗೆಮಾಡಲ್ಪಟ್ಟವಳೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ ಹಗೆಮಾಡಲ್ಪಟ್ಟವಳ ಮಗನು ಚೊಚ್ಚಲಾಗಿದ್ದರೆ

ಧರ್ಮೋಪದೇಶಕಾಂಡ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी