ಗಲಾತ್ಯದವರಿಗೆ 1:12

ನಾನು ಅದನ್ನು ಮನುಷ್ಯ ನಿಂದ ಹೊಂದಲಿಲ್ಲ. ಇಲ್ಲವೆ ನನಗೆ ಯಾರೂ ಉಪದೇಶಿಸಲಿಲ್ಲ. ಆದರೆ ಯೇಸು ಕ್ರಿಸ್ತನಿಂದಲೇ ಅದು ನನಗೆ ಪ್ರಕಟವಾಯಿತು.

ಸಂದರ್ಭದೊಂದಿಗೆ ಓದಿ · ಗಲಾತ್ಯದವರಿಗೆ 1

10ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.

11ಸಹೋದರರೇ, ನಾನು ಸಾರಿದ ಸುವಾರ್ತೆ ಯಂತೂ ಮನುಷ್ಯನಿಂದ ಬಂದದ್ದಲ್ಲವೆಂದು ನಿಮಗೆ ದೃಢವಾಗಿ ಹೇಳುತ್ತೇನೆ.

12ನಾನು ಅದನ್ನು ಮನುಷ್ಯ ನಿಂದ ಹೊಂದಲಿಲ್ಲ. ಇಲ್ಲವೆ ನನಗೆ ಯಾರೂ ಉಪದೇಶಿಸಲಿಲ್ಲ. ಆದರೆ ಯೇಸು ಕ್ರಿಸ್ತನಿಂದಲೇ ಅದು ನನಗೆ ಪ್ರಕಟವಾಯಿತು.

13ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದಾಗಿತ್ತೆಂದು ನೀವು ಕೇಳಿದ್ದೀರಷ್ಟೆ; ನಾನು ದೇವರ ಸಭೆಯನ್ನು ಮಿತಿವಿಾರಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

14ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ ನನ್ನ ಸ್ವಂತ ಜನಾಂಗದವ ರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತದಲ್ಲಿ ಹೆಚ್ಚು ಆಸಕ್ತನಾಗಿದ್ದೆನು

ಗಲಾತ್ಯದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी