ಸಹೋದರರೇ, ನಾನು ಸಾರಿದ ಸುವಾರ್ತೆ ಯಂತೂ ಮನುಷ್ಯನಿಂದ ಬಂದದ್ದಲ್ಲವೆಂದು ನಿಮಗೆ ದೃಢವಾಗಿ ಹೇಳುತ್ತೇನೆ.
9ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.
10ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
11ಸಹೋದರರೇ, ನಾನು ಸಾರಿದ ಸುವಾರ್ತೆ ಯಂತೂ ಮನುಷ್ಯನಿಂದ ಬಂದದ್ದಲ್ಲವೆಂದು ನಿಮಗೆ ದೃಢವಾಗಿ ಹೇಳುತ್ತೇನೆ.
12ನಾನು ಅದನ್ನು ಮನುಷ್ಯ ನಿಂದ ಹೊಂದಲಿಲ್ಲ. ಇಲ್ಲವೆ ನನಗೆ ಯಾರೂ ಉಪದೇಶಿಸಲಿಲ್ಲ. ಆದರೆ ಯೇಸು ಕ್ರಿಸ್ತನಿಂದಲೇ ಅದು ನನಗೆ ಪ್ರಕಟವಾಯಿತು.
13ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದಾಗಿತ್ತೆಂದು ನೀವು ಕೇಳಿದ್ದೀರಷ್ಟೆ; ನಾನು ದೇವರ ಸಭೆಯನ್ನು ಮಿತಿವಿಾರಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ