ಯೆಹೆಜ್ಕೇಲನು 16:14

ಇದಲ್ಲದೆ, ನಿನ್ನ ಸೌಂದ ರ್ಯದಿಂದ ನಿನ್ನ ಕೀರ್ತಿಯು ಅನ್ಯಜನಾಂಗಗಳಲ್ಲಿ ಹಬ್ಬಿತು; ಯಾಕಂದರೆ ನಾನು ನಿನ್ನ ಮೇಲೆ ಇಟ್ಟ ಸಂಪೂರ್ಣ ವೈಭವದಿಂದಲೇ ಎಂದು ದೇವರಾದ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

12ನಿನ್ನ ಹಣೆಯ ಮೇಲೆ ರತ್ನಾಭರಣವನ್ನೂ ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ ನಿನ್ನ ತಲೆಯ ಮೇಲೆ ಶೃಂಗಾರ ಕಿರೀಟವನ್ನೂ ಇಟ್ಟೆನು.

13ನಿನ್ನ ಒಡವೆಗಳು ಬೆಳ್ಳಿ ಬಂಗಾರಗಳು, ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಯವಾದ ಹಿಟ್ಟನ್ನೂ ಜೇನನ್ನೂ ಎಣ್ಣೆಯನ್ನೂ ತಿನ್ನುತ್ತಿದ್ದೆ, ನಿನ್ನ ಲಾವಣ್ಯವು ಅತಿ ಮನೋಹರವಾಗಿ ವೃದ್ಧಿಗೊಂಡು ನೀನು ರಾಣಿಯಾದೆ.

14ಇದಲ್ಲದೆ, ನಿನ್ನ ಸೌಂದ ರ್ಯದಿಂದ ನಿನ್ನ ಕೀರ್ತಿಯು ಅನ್ಯಜನಾಂಗಗಳಲ್ಲಿ ಹಬ್ಬಿತು; ಯಾಕಂದರೆ ನಾನು ನಿನ್ನ ಮೇಲೆ ಇಟ್ಟ ಸಂಪೂರ್ಣ ವೈಭವದಿಂದಲೇ ಎಂದು ದೇವರಾದ ಕರ್ತನು ಹೇಳುತ್ತಾನೆ.

15ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ.

16ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ.

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी