ನಿನ್ನ ಹಣೆಯ ಮೇಲೆ ರತ್ನಾಭರಣವನ್ನೂ ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ ನಿನ್ನ ತಲೆಯ ಮೇಲೆ ಶೃಂಗಾರ ಕಿರೀಟವನ್ನೂ ಇಟ್ಟೆನು.
10ಇದಲ್ಲದೆ ನಾನು ಕಸೂ ತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲ ಪ್ರಾಣಿಯ ಜೋಡುಗಳನ್ನು ಕೊಟ್ಟೆನು, ನಯವಾದ ನಾರುಮಡಿ ಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.
11ನಾನು ಆಭರಣಗಳಿಂದಲೂ ನಿನ್ನನ್ನು ಅಲಂಕರಿಸಿದೆನು; ನಾನು ನಿನ್ನ ಕೈಗಳಿಗೆ ಕಡಗ ಗಳನ್ನು, ನಿನ್ನ ಕೊರಳಿಗೆ ಸರವನ್ನು ಹಾಕಿದೆನು.
12ನಿನ್ನ ಹಣೆಯ ಮೇಲೆ ರತ್ನಾಭರಣವನ್ನೂ ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ ನಿನ್ನ ತಲೆಯ ಮೇಲೆ ಶೃಂಗಾರ ಕಿರೀಟವನ್ನೂ ಇಟ್ಟೆನು.
13ನಿನ್ನ ಒಡವೆಗಳು ಬೆಳ್ಳಿ ಬಂಗಾರಗಳು, ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಯವಾದ ಹಿಟ್ಟನ್ನೂ ಜೇನನ್ನೂ ಎಣ್ಣೆಯನ್ನೂ ತಿನ್ನುತ್ತಿದ್ದೆ, ನಿನ್ನ ಲಾವಣ್ಯವು ಅತಿ ಮನೋಹರವಾಗಿ ವೃದ್ಧಿಗೊಂಡು ನೀನು ರಾಣಿಯಾದೆ.
14ಇದಲ್ಲದೆ, ನಿನ್ನ ಸೌಂದ ರ್ಯದಿಂದ ನಿನ್ನ ಕೀರ್ತಿಯು ಅನ್ಯಜನಾಂಗಗಳಲ್ಲಿ ಹಬ್ಬಿತು; ಯಾಕಂದರೆ ನಾನು ನಿನ್ನ ಮೇಲೆ ಇಟ್ಟ ಸಂಪೂರ್ಣ ವೈಭವದಿಂದಲೇ ಎಂದು ದೇವರಾದ ಕರ್ತನು ಹೇಳುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ