ಯೆಶಾಯ 25:5

ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.

ಸಂದರ್ಭದೊಂದಿಗೆ ಓದಿ · ಯೆಶಾಯ 25

3ಆದಕಾರಣ ಬಲಿಷ್ಠವಾದ ಜನಾಂಗವು, ನಿನ್ನನ್ನು ಘನಪಡಿಸುವದು ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವದು.

4ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ.

5ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.

6ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು.

7ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ (ನಾಶ) ತೆಗೆದುಹಾಕುವನು.

ಯೆಶಾಯ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी