ನ್ಯಾಯಸ್ಥಾಪಕರು 15:11

ಆಗ ಯೆಹೂದ ದಲ್ಲಿ ಮೂರು ಸಾವಿರ ಜನವು ಏಟಾಮ್‌ ಬಂಡೆಯ ಮೇಲಕ್ಕೆ ಹೋಗಿ ಸಂಸೋನನಿಗೆ--ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಯಾಕೆ ಮಾಡಿದಿ? ಅಂದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 15

9ಫಿಲಿಷ್ಟಿಯರು ಹೊರಟು ಹೋಗಿ ಯೆಹೂದದ ಲೆಹೀಯಲ್ಲಿ ವ್ಯಾಪಿಸಿ ಪಾಳೆಯ ಮಾಡಿಕೊಂಡರು.

10ಯೆಹೂದ ಮನುಷ್ಯರು ಅವರಿಗೆ--ನೀವು ನಮಗೆ ವಿರೋಧವಾಗಿ ಬಂದದ್ದೇನು ಅಂದರು. ಫಿಲಿಷ್ಟಿಯರು--ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವದಕ್ಕೆ ಅವನನ್ನು ಹಿಡಿದು ಕಟ್ಟುವದಕ್ಕೆ ಬಂದೆವು ಅಂದರು.

11ಆಗ ಯೆಹೂದ ದಲ್ಲಿ ಮೂರು ಸಾವಿರ ಜನವು ಏಟಾಮ್‌ ಬಂಡೆಯ ಮೇಲಕ್ಕೆ ಹೋಗಿ ಸಂಸೋನನಿಗೆ--ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಯಾಕೆ ಮಾಡಿದಿ? ಅಂದರು.

12ಅದಕ್ಕವನು--ಅವರು ನನಗೆ ಮಾಡಿದ ಪ್ರಕಾ ರವೇ ನಾನು ಅವರಿಗೆ ಮಾಡಿದೆನು ಎಂದು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು ಅಂದರು. ಸಂಸೋನನು ಅವರಿಗೆ--ನೀವು ನನ್ನ ಮೇಲೆ ಬೀಳುವದಿಲ್ಲವೆಂದು ನನಗೆ ಆಣೆಇಡಿರಿ ಅಂದನು.

13ಅದಕ್ಕವರು--ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ ಅವರ ಕೈಯಲ್ಲಿ ಒಪ್ಪಿಸಿಕೊಡುವೆವು; ನಾವು ನಿನ್ನನ್ನು ನಿಜವಾಗಿ ಕೊಲ್ಲುವದೇ ಇಲ್ಲ ಅಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ ಬಂಡೆಯ ಮೇಲಿ ನಿಂದ ತಂದರು.

ನ್ಯಾಯಸ್ಥಾಪಕರು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी