ನ್ಯಾಯಸ್ಥಾಪಕರು 15:12

ಅದಕ್ಕವನು--ಅವರು ನನಗೆ ಮಾಡಿದ ಪ್ರಕಾ ರವೇ ನಾನು ಅವರಿಗೆ ಮಾಡಿದೆನು ಎಂದು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು ಅಂದರು. ಸಂಸೋನನು ಅವರಿಗೆ--ನೀವು ನನ್ನ ಮೇಲೆ ಬೀಳುವದಿಲ್ಲವೆಂದು ನನಗೆ ಆಣೆಇಡಿರಿ ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 15

10ಯೆಹೂದ ಮನುಷ್ಯರು ಅವರಿಗೆ--ನೀವು ನಮಗೆ ವಿರೋಧವಾಗಿ ಬಂದದ್ದೇನು ಅಂದರು. ಫಿಲಿಷ್ಟಿಯರು--ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವದಕ್ಕೆ ಅವನನ್ನು ಹಿಡಿದು ಕಟ್ಟುವದಕ್ಕೆ ಬಂದೆವು ಅಂದರು.

11ಆಗ ಯೆಹೂದ ದಲ್ಲಿ ಮೂರು ಸಾವಿರ ಜನವು ಏಟಾಮ್‌ ಬಂಡೆಯ ಮೇಲಕ್ಕೆ ಹೋಗಿ ಸಂಸೋನನಿಗೆ--ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಯಾಕೆ ಮಾಡಿದಿ? ಅಂದರು.

12ಅದಕ್ಕವನು--ಅವರು ನನಗೆ ಮಾಡಿದ ಪ್ರಕಾ ರವೇ ನಾನು ಅವರಿಗೆ ಮಾಡಿದೆನು ಎಂದು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು ಅಂದರು. ಸಂಸೋನನು ಅವರಿಗೆ--ನೀವು ನನ್ನ ಮೇಲೆ ಬೀಳುವದಿಲ್ಲವೆಂದು ನನಗೆ ಆಣೆಇಡಿರಿ ಅಂದನು.

13ಅದಕ್ಕವರು--ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ ಅವರ ಕೈಯಲ್ಲಿ ಒಪ್ಪಿಸಿಕೊಡುವೆವು; ನಾವು ನಿನ್ನನ್ನು ನಿಜವಾಗಿ ಕೊಲ್ಲುವದೇ ಇಲ್ಲ ಅಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ ಬಂಡೆಯ ಮೇಲಿ ನಿಂದ ತಂದರು.

14ಅವನು ಲೆಹೀಗೆ ಬಂದಾಗ ಪಿಲಿಷ್ಟಿ ಯರು ಅವನಿಗೆ ಎದುರಾಗಿ ಬಂದು ಆರ್ಭಟಿಸಿದರು. ಕರ್ತನ ಆತ್ಮನು ಅವನ ಮೇಲೆ ಬಲವಾಗಿ ಬಂದದ್ದರಿಂದ ಅವನ ತೋಳುಗಳಲ್ಲಿ ಕಟ್ಟಿದ್ದ ಹಗ್ಗಗಳು ಬೆಂಕಿಯಿಂದ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಗಳಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.

ನ್ಯಾಯಸ್ಥಾಪಕರು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी