ಧರ್ಮೋಪದೇಶಕಾಂಡ 24:18

ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ವಿಮೋಚಿಸಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 24

16ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.

17ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ.

18ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ವಿಮೋಚಿಸಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.

19ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ ಅಲ್ಲಿ ಸಿವುಡನ್ನು ಮರೆತುಬಿಟ್ಟರೆ ಅದನ್ನು ತಕ್ಕೊಳ್ಳುವದಕ್ಕೆ ತಿರುಗಿಕೊಳ್ಳಬಾರದು; ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸುವ ಹಾಗೆ ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.

20ನಿನ್ನ ಇಪ್ಪೆಗಳನ್ನು ಬಡಿದರೆ ಮಿಕ್ಕಿದ್ದನ್ನು ಆರಿಸ ಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧ ವೆಗೂ ಇರಲಿ.

ಧರ್ಮೋಪದೇಶಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी