ಧರ್ಮೋಪದೇಶಕಾಂಡ 24:16

ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 24

14ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು.

15ದಿನದಿನಕ್ಕೆ ಅವನ ಕೂಲಿ ಕೊಡಬೇಕು; ಸೂರ್ಯನು ಮುಣುಗುವದಕ್ಕಿಂತ ಮುಂಚೆ ಅದನ್ನು ಕೊಡಬೇಕು. ಅವನು ಬಡವನಾಗಿದ್ದು ಅದರ ಮೇಲೆಯೇ ತನ್ನ ಮನಸ್ಸು ಇಟ್ಟಿದ್ದಾನೆ; ಕೊಡದಿದ್ದರೆ ಅವನು ನಿನಗೆ ವಿರೋಧವಾಗಿ ಕರ್ತನ ಕಡೆಗೆ ಕೂಗುವನು; ಆಗ ನಿನ್ನ ಮೇಲೆ ಪಾಪವಿರುವದು.

16ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.

17ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ.

18ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ವಿಮೋಚಿಸಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.

ಧರ್ಮೋಪದೇಶಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी