೧ ಅರಸುಗಳು 12:3

ಆಗ ಯಾರೊಬ್ಬಾಮನೂ ಇಸ್ರಾಯೇಲಿನ ಸಮಸ್ತ ಕೂಟವೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗ ಮಾಡಿದನು;

ಸಂದರ್ಭದೊಂದಿಗೆ ಓದಿ · ೧ ಅರಸುಗಳು 12

1ರೆಹಬ್ಬಾಮನು ಶೆಕೆಮಿಗೆ ಹೋದನು; ಯಾಕಂದರೆ ಅವನನ್ನು ಅರಸನಾಗ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.

2(ಅರಸನಾದ ಸೊಲೊಮೋನನ ಸಮ್ಮುಖ ದಿಂದ ಓಡಿಹೋಗಿ ಐಗುಪ್ತದಲ್ಲಿ ವಾಸವಾಗಿದ್ದು) ಇನ್ನೂ ಐಗುಪ್ತದಲ್ಲಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇದನ್ನು ಕೇಳಿದಾಗ ಅವರು ಅವ ನನ್ನು ಕರೇಕಳುಹಿಸಿದರು.

3ಆಗ ಯಾರೊಬ್ಬಾಮನೂ ಇಸ್ರಾಯೇಲಿನ ಸಮಸ್ತ ಕೂಟವೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗ ಮಾಡಿದನು;

4ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ ನಾವು ನಿನ್ನನ್ನು ಸೇವಿ ಸುವೆವು ಅಂದರು.

5ಅವನು ಅವರಿಗೆ--ನೀವು ಹೋಗಿ ಮೂರು ದಿವಸಗಳ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಅವರು ಹೋದರು.

೧ ಅರಸುಗಳು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी