೧ ಅರಸುಗಳು 12:5

ಅವನು ಅವರಿಗೆ--ನೀವು ಹೋಗಿ ಮೂರು ದಿವಸಗಳ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಅವರು ಹೋದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 12

3ಆಗ ಯಾರೊಬ್ಬಾಮನೂ ಇಸ್ರಾಯೇಲಿನ ಸಮಸ್ತ ಕೂಟವೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗ ಮಾಡಿದನು;

4ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ ನಾವು ನಿನ್ನನ್ನು ಸೇವಿ ಸುವೆವು ಅಂದರು.

5ಅವನು ಅವರಿಗೆ--ನೀವು ಹೋಗಿ ಮೂರು ದಿವಸಗಳ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಅವರು ಹೋದರು.

6ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನು ಬದುಕಿರುವಾಗ ಅವನ ಮುಂದೆ ನಿಲ್ಲುತ್ತಿದ್ದ ಹಿರಿಯರ ಆಲೋಚನೆ ಕೇಳಲು--ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ಏನು ಆಲೋಚನೆ ಹೇಳುತ್ತೀರಿ ಅಂದನು.

7ಅವರು ಅವನಿಗೆ--ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ ಒಳ್ಳೇ ಮಾತುಗಳಿಂದ ಅವರಿಗೆ ಪ್ರತ್ಯುತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು ಎಂದು ಹೇಳಿದರು.

೧ ಅರಸುಗಳು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी