ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.
35ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.
36ಆದರೆ ಕರ್ತನ ಭಾರವನ್ನು ಇನ್ನು ಎಂದಿಗೂ ನುಡಿಯುವದಿಲ್ಲ; ಒಬ್ಬೊ ಬ್ಬನಿಗೆ ತನ್ನ ನುಡಿಯೇ ಭಾರವಾಗುವದು; ನೀವು ಜೀವವುಳ್ಳ ದೇವರ ವಾಕ್ಯಗಳನ್ನು ಅಂದರೆ ನಮ್ಮ ದೇವರಾದ ಸೈನ್ಯಗಳ ಕರ್ತನ ವಾಕ್ಯಗಳನ್ನೇ ಮಾರ್ಪಡಿ ಸಿದ್ದೀರಿ.
37ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.
38ಆದರೆ ನೀವು--ಕರ್ತನ ಭಾರವೆಂದು ಹೇಳುತ್ತಿದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಭಾರವೆಂದು ನೀವು ಹೇಳಬಾರದೆಂಬದಾಗಿ ನಾನು ನಿಮಗೆ ಹೇಳಿ ಕಳುಹಿ ಸಿದ ಮೇಲೆ ಕರ್ತನ ಭಾರವೆಂಬ ಈ ಮಾತನ್ನು ನೀವು ಹೇಳುವದರಿಂದ
39ಕರ್ತನು ಹೀಗೆ ಹೇಳು ತ್ತಾನೆ--ನಾನು ಇಗೋ, ನಾನೇ ನಿಮ್ಮನ್ನು ಪೂರ್ಣವಾಗಿ ಮರೆತುಬಿಡುವೆನು; ನಿಮ್ಮನ್ನು ನಿಮಗೂ ನಿಮ್ಮ ತಂದೆ ಗಳಿಗೂ ಕೊಟ್ಟ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತಳ್ಳಿಬಿಡುವೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ