ಯೆರೆಮಿಯ 23:35

ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 23

33ಇದಲ್ಲದೆ ಈ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ಕರ್ತನ ಭಾರವೇನೆಂದು ನಿನ್ನನ್ನು ಕೇಳುವಾಗ ನೀನು ಅವರಿಗೆ--ಏನು ಭಾರ? ನಾನು ನಿಮ್ಮನ್ನು ತಳ್ಳಿಬಿಡುವೆನೆಂದು ಕರ್ತನು ಅನ್ನುತ್ತಾನೆಂದು ಹೇಳಬೇಕು.

34ಕರ್ತನ ಭಾರವೆಂದೆನ್ನುವ ಪ್ರವಾದಿ ಯಾಗಲಿ ಯಾಜಕನಾಗಲಿ ಜನರಾಗಲಿ ಅವರ ವಿಷಯ ವೇನಂದರೆ--ನಾನು ಅಂಥಾ ಮನುಷ್ಯನನ್ನೂ ಅವನ ಮನೆಯನ್ನೂ ಶಿಕ್ಷಿಸುವೆನು.

35ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.

36ಆದರೆ ಕರ್ತನ ಭಾರವನ್ನು ಇನ್ನು ಎಂದಿಗೂ ನುಡಿಯುವದಿಲ್ಲ; ಒಬ್ಬೊ ಬ್ಬನಿಗೆ ತನ್ನ ನುಡಿಯೇ ಭಾರವಾಗುವದು; ನೀವು ಜೀವವುಳ್ಳ ದೇವರ ವಾಕ್ಯಗಳನ್ನು ಅಂದರೆ ನಮ್ಮ ದೇವರಾದ ಸೈನ್ಯಗಳ ಕರ್ತನ ವಾಕ್ಯಗಳನ್ನೇ ಮಾರ್ಪಡಿ ಸಿದ್ದೀರಿ.

37ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು.

ಯೆರೆಮಿಯ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी