ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
21ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.
22ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ.
23ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
24ಬಾಬೆಲಿನ ಅರಸನ ತೋಳು ಗಳನ್ನು ನಾನು ಬಲಪಡಿಸುವೆನು; ಅವನ ಕೈಯಲ್ಲಿ ನನ್ನ ಕತ್ತಿಯನ್ನಿಡುವೆನು; ಫರೋಹನ ತೋಳನ್ನು ಮುರಿಯುವೆನು, ಅವನು ಗಾಯದಿಂದ ಸಾಯುವ ಹಾಗೆ ಅವನ ಮುಂದೆ ನರಳಾಡುವನು.
25ನಾನು ಬಾಬೆಲಿನ ಅರಸನ ತೋಳುಗಳಿಗೆ ಬಲ ಕೊಡುವೆನು, ಫರೋಹನ ತೋಳುಗಳು ಬಿದ್ದು ಹೋಗುವವು; ಯಾವಾಗ ನಾನು ನನ್ನ ಕತ್ತಿಯನ್ನು ಬಾಬೆಲಿನ ಅರಸನ ಕೈಗೆ ಕೊಡುವೆನೋ ಅದನ್ನು ಐಗುಪ್ತದೇಶದಿಂದ ಹೊರಗೆ ಚಾಚುವೆನೋ ಆಗ ನಾನೇ ಕರ್ತನೆಂದು ಅವರಿಗೆ ಗೊತ್ತಾಗುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ