ಯೆಹೆಜ್ಕೇಲನು 30:21

ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 30

19ಹೀಗೆ ನಾನು ಐಗುಪ್ತ ದಲ್ಲಿ ನ್ಯಾಯಗಳನ್ನು ತೀರಿಸುವೆನು, ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.

20ಇದಲ್ಲದೆ ಹನ್ನೊಂದನೇ ವರುಷದಲ್ಲಿ ಮೊದಲ ನೆಯ ತಿಂಗಳಿನ, ಏಳನೆಯ ದಿನದಲ್ಲಿ ಏನಾಯಿತಂದರೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --

21ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.

22ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ.

23ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.

ಯೆಹೆಜ್ಕೇಲನು 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी