ಲೂಕನು 7:30

ಆದರೆ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಅವನಿಂದ ಬಾಪ್ತಿಸ್ಮಮಾಡಿಸಿಕೊಳ್ಳದೆ ಹೋದದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.

ಸಂದರ್ಭದೊಂದಿಗೆ ಓದಿ · ಲೂಕನು 7

28ಯಾಕಂದರೆ-- ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡ ಪ್ರವಾದಿಯು ಯಾವನೂ ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

29ಅವನಿಂದ ಉಪ ದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಯೋಹಾನನ ಬಾಪ್ತಿಸ್ಮ ಮಾಡಿಸಿಕೊಂಡವರಾಗಿ ದೇವರು ನೀತಿವಂತನೆಂದು ಒಪ್ಪಿಕೊಂಡರು.

30ಆದರೆ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಅವನಿಂದ ಬಾಪ್ತಿಸ್ಮಮಾಡಿಸಿಕೊಳ್ಳದೆ ಹೋದದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.

31ಕರ್ತನು--ಈ ಸಂತತಿಯವರನ್ನು ನಾನು ಯಾವದಕ್ಕೆ ಹೋಲಿಸಲಿ? ಮತ್ತು ಅವರು ಯಾವದಕ್ಕೆ ಹೋಲಿಕೆಯಾಗಿದ್ದಾರೆ?

32ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ.

ಲೂಕನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी