ಕರ್ತನು--ಈ ಸಂತತಿಯವರನ್ನು ನಾನು ಯಾವದಕ್ಕೆ ಹೋಲಿಸಲಿ? ಮತ್ತು ಅವರು ಯಾವದಕ್ಕೆ ಹೋಲಿಕೆಯಾಗಿದ್ದಾರೆ?
29ಅವನಿಂದ ಉಪ ದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಯೋಹಾನನ ಬಾಪ್ತಿಸ್ಮ ಮಾಡಿಸಿಕೊಂಡವರಾಗಿ ದೇವರು ನೀತಿವಂತನೆಂದು ಒಪ್ಪಿಕೊಂಡರು.
30ಆದರೆ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಅವನಿಂದ ಬಾಪ್ತಿಸ್ಮಮಾಡಿಸಿಕೊಳ್ಳದೆ ಹೋದದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
31ಕರ್ತನು--ಈ ಸಂತತಿಯವರನ್ನು ನಾನು ಯಾವದಕ್ಕೆ ಹೋಲಿಸಲಿ? ಮತ್ತು ಅವರು ಯಾವದಕ್ಕೆ ಹೋಲಿಕೆಯಾಗಿದ್ದಾರೆ?
32ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ.
33ಬಾಪ್ತಿಸ್ಮ ಮಾಡಿಸುವ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ಇಲ್ಲವೆ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು; ಅದಕ್ಕೆ ನೀವು--ಅವನಲ್ಲಿ ದೆವ್ವವಿದೆ ಅನ್ನುತ್ತೀರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ