ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.
37ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು.
38ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು.
39ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.
40ಆಗ ಅವನು ತನ್ನ ಸ್ಥಳಕ್ಕೆ ಹಿಂತಿರುಗಿದನು. ಅರಸನು ಗಿಲ್ಗಾಲಿಗೆ ತೆರಳಿದನು; ಹಾಗೆಯೇ ಅವನ ಸಂಗಡ ಕಿಮ್ಹಾಮನು ತೆರಳಿದನು; ಯೆಹೂದದ ಜನರೆಲ್ಲರೂ ಇಸ್ರಾಯೇಲಿನ ಅರ್ಧ ಪಾಲು ಜನರೂ ಅರಸನನ್ನು ಕರಕೊಂಡು ಹೋದರು.
41ಇಗೋ, ಇಸ್ರಾಯೇಲ್ ಜನರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ--ನಮ್ಮ ಸಹೋದರರಾದ ಯೆಹೂದ ಜನರು ಕಳ್ಳತನವಾಗಿ ನಿನ್ನನ್ನು ಕರ ತಂದದ್ದೇನು? ಅರಸನನ್ನೂ ಅವನ ಮನೆಯವರನ್ನೂ ಅವನ ಸಂಗಡ ಇರುವ ದಾವೀದನ ಎಲ್ಲಾ ಜನರನ್ನೂ ಯೊರ್ದನನ್ನು ದಾಟಿಸಿದ್ದೇನು ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ