೨ ಸಮುವೇಲನು 19:38

ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 19

36ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವ ವರೆಗೂ ಅರಸನ ಸಂಗಡ ಬರುವನು; ಅದಕ್ಕೆ ಇಂಥಾ ಬಹುಮಾನ ಕೊಡುವದೇನು?

37ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು.

38ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು.

39ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.

40ಆಗ ಅವನು ತನ್ನ ಸ್ಥಳಕ್ಕೆ ಹಿಂತಿರುಗಿದನು. ಅರಸನು ಗಿಲ್ಗಾಲಿಗೆ ತೆರಳಿದನು; ಹಾಗೆಯೇ ಅವನ ಸಂಗಡ ಕಿಮ್ಹಾಮನು ತೆರಳಿದನು; ಯೆಹೂದದ ಜನರೆಲ್ಲರೂ ಇಸ್ರಾಯೇಲಿನ ಅರ್ಧ ಪಾಲು ಜನರೂ ಅರಸನನ್ನು ಕರಕೊಂಡು ಹೋದರು.

೨ ಸಮುವೇಲನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी