೧ ಅರಸುಗಳು 2:35

ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 2

33ಆದದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆ ಯೂ ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವದು. ಆದರೆ ದಾವೀದನ ಮೇಲೆಯೂ ಅವನ ಸಂತಾನದವರ ಮೇಲೆಯೂ ಮನೆಯ ಮೇಲೆಯೂ ಸಿಂಹಾಸನದ ಮೇಲೆಯೂ ಕರ್ತನಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವದು ಅಂದನು.

34ಹಾಗೆಯೇ ಯೆಹೋಯಾ ದಾವನ ಮಗನಾದ ಬೆನಾಯನು ಹೋಗಿ ಅವನ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಅವನು ಅರಣ್ಯದಲ್ಲಿರುವ ತನ್ನ ಮನೆಯಲ್ಲಿ ಹೂಣಲ್ಪಟ್ಟನು.

35ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

36ಅರಸನು ಶಿಮ್ಮಿಯನ್ನು ಕರೆಕಳುಹಿಸಿ ಅವನಿಗೆ--ನೀನು ಯೆರೂಸಲೇಮಿನಲ್ಲಿ ನಿನಗೆ ಮನೆಯನ್ನು ಕಟ್ಟಿಸಿ ಕೊಂಡು ಅಲ್ಲಿಂದ ಎಲ್ಲಿಗೂ ಹೋಗದೆ ವಾಸವಾಗಿರು.

37ಯಾವ ದಿನದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವಿಯೋ ಆ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತಾ ತಿಳಿದುಕೋ. ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವದು ಅಂದನು.

೧ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी