೧ ಅರಸುಗಳು 2:33

ಆದದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆ ಯೂ ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವದು. ಆದರೆ ದಾವೀದನ ಮೇಲೆಯೂ ಅವನ ಸಂತಾನದವರ ಮೇಲೆಯೂ ಮನೆಯ ಮೇಲೆಯೂ ಸಿಂಹಾಸನದ ಮೇಲೆಯೂ ಕರ್ತನಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವದು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 2

31ಅರಸನು ಅವ ನಿಗೆ--ಅವನು ಹೇಳಿದ ಪ್ರಕಾರ ಮಾಡು; ನನ್ನಿಂದಲೂ ನನ್ನ ತಂದೆಯ ಮನೆಯಿಂದಲೂ ಯೋವಾಬನು ಚೆಲ್ಲಿದ ನಿರಪರಾಧ ರಕ್ತವನ್ನು ತೊಲಗಿಸುವ ಹಾಗೆ ಅವನ ಮೇಲೆ ಬಿದ್ದು ಅವನನ್ನು ಹೂಣಿಡು.

32ಆಗ ಕರ್ತನು ಅವನ ತಲೆಯ ಮೇಲೆ ಅವನ ರಕ್ತಾಪರಾಧ ವನ್ನು ಬರಮಾಡುವನು. ನನ್ನ ತಂದೆಯಾದ ದಾವೀ ದನು ತಿಳಿಯದಿರುವಾಗ ಅವನು ತನಗಿಂತ ನೀತಿಯುಳ್ಳ ಉತ್ತಮರಾದ ಇಬ್ಬರ ಮೇಲೆ ಬಿದ್ದು ಅವರನ್ನು ಕತ್ತಿ ಯಿಂದ ಕೊಂದನು. ಅವರು ಯಾರಂದರೆ, ಇಸ್ರಾ ಯೇಲಿನ ಸೈನ್ಯಕ್ಕೆ ಅಧಿಪತಿಯಾಗಿದ್ದ ನೇರನ ಮಗನಾದ ಅಬ್ನೇರನೂ ಯೆಹೂದ ಸೈನ್ಯಕ್ಕೆ ಅಧಿಪತಿಯಾಗಿದ್ದ ಯೆತೆರನ ಮಗನಾದ ಅಮಾಸನೂ.

33ಆದದರಿಂದ ಅವರ ರಕ್ತಾಪರಾಧವು ಯೋವಾಬನ ತಲೆಯ ಮೇಲೆ ಯೂ ಅವನ ಸಂತತಿಯವರ ತಲೆಯ ಮೇಲೆಯೂ ಯುಗಯುಗಕ್ಕೂ ಇರುವದು. ಆದರೆ ದಾವೀದನ ಮೇಲೆಯೂ ಅವನ ಸಂತಾನದವರ ಮೇಲೆಯೂ ಮನೆಯ ಮೇಲೆಯೂ ಸಿಂಹಾಸನದ ಮೇಲೆಯೂ ಕರ್ತನಿಂದ ಸಮಾಧಾನವು ಯುಗಯುಗಾಂತರಕ್ಕೂ ಇರುವದು ಅಂದನು.

34ಹಾಗೆಯೇ ಯೆಹೋಯಾ ದಾವನ ಮಗನಾದ ಬೆನಾಯನು ಹೋಗಿ ಅವನ ಮೇಲೆ ಬಿದ್ದು ಅವನನ್ನು ಕೊಂದುಹಾಕಿದನು. ಅವನು ಅರಣ್ಯದಲ್ಲಿರುವ ತನ್ನ ಮನೆಯಲ್ಲಿ ಹೂಣಲ್ಪಟ್ಟನು.

35ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

೧ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी